ಟಿಸ್ಸಿ ಥಾಮಸ್ (ಜನನ - ೧೯೬೪) ಭಾರತದ ಬಹು ನಿರೀಕ್ಷಿತ ಅಗ್ನಿ-೪ ಕ್ಷಿಪಣಿ ಯೋಜನೆಯ ನಿರ್ದೇಶಕರು. ಇವರು ಪ್ರಸಕ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್) ಯ ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.'ಡಿ ಆರ್ ಡಿ ಒ'ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಮಹಿಳೆ.( ಜೆ.ಮಂಜುಳಾ ಮೊದಲನೆಯವರು). ಇವರು ಭಾರತದ ಕ್ಷಿಪಣಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕರು. ಇವರನ್ನು ' ' (ಕ್ಷಿಪಣಿ ಮಹಿಳೆ) ಎಂದು ಕರೆಯುತ್ತಾರೆ. == ಬಾಲ್ಯ ಮತ್ತು ಶಿಕ್ಷಣ == ಇವರು ಏಪ್ರಿಲ್ ೧೯೬೩ ರಲ್ಲಿ ಕೇರಳದ ಆಲಪುಳದಲ್ಲಿ ಜನಿಸಿದರು. ತಂದೆ ಥಾಮಸ್ ಅಕೌಂಟಂಟ್ ಆಗಿದ್ದರು.ತಾಯಿ ಕುಂಜಮ್ಮ ಥಾಮಸ್ ಗೃಹಿಣಿ. ಇಂಜಿನಿಯರಿಂಗ್ ಪದವಿಯನ್ನು ತ್ರಿಶೂರ್ ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದರು. ಆಗಿನ ಇನ್ಸ್ಟಿಟ್ಯೂಟ್ ಆಫ್ ಆರ್ಮ್ಡ್ ಟೆಕ್ನಾಲಜಿ (ಈಗ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ) ಪೂನಾದಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಎಂ.ಟೆಕ್ ಪದವಿ ಗಳಿಸಿದರು. == ವೃತ್ತಿ ಜೀವನ == ಟಿಸ್ಸಿ ಥಾಮಸ್, ಭಾರತದ ಪ್ರಮುಖ ಕ್ಷಿಪಣಿಗಳಾದ ಅಗ್ನಿ-೩, ಅಗ್ನಿ-೪ ಮತ್ತು ಅಗ್ನಿ-೫ ಯೋಜನೆಯ ನಿರ್ದೇಶಕಿ. ಇದರಿಂದಾಗಿ ಇವರು "ಅಗ್ನಿಪುತ್ರಿ" ಎಂದೇ ಪ್ರಖ್ಯಾತರಾಗಿದ್ದಾರೆ. ಅಗ್ನಿ-೫ ಕ್ಷಿಪಣಿ ಭಾರತದ ಹೆಮ್ಮೆ. == ವೈಯಕ್ತಿಕ ಜೀವನ == ಇವರು ಭಾರತಿಯ ನೌಕಾಪಡೆಯಲ್ಲಿ ಕಮಾಂಡರ್ ಆಗಿರುವ ಸರೋಜ್ ಕುಮಾರ್ ರನ್ನು ವಿವಾಹವಾಗಿದ್ದಾರೆ. ಇವರ ಮಗ ತೇಜಸ್ ಒಬ್ಬ ಇಂಜಿನಿಯರ್. == ಪ್ರಶಸ್ತಿಗಳು == ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ . ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಕೊಡುಗೆಗಾಗಿ ಥಾಮಸ್ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಅವರು ೨೦೧೮ ರಲ್ಲಿ ಜೈಪುರದ (ಎಫ್ಎಂಎಸ್-ಐಆರ್ಎಂ) ಮ್ಯಾನೇಜ್ಮೆಂಟ್ ಸ್ಟಡೀಸ್ - ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನಲ್ಲಿ ಡಾ. ಥಾಮಸ್ ಕ್ಯಾಂಗನ್ ಲೀಡರ್ಶಿಪ್ ಪ್ರಶಸ್ತಿಯನ್ನು ಪಡೆದರು. == ಬಾಹ್ಯ ಸಂಪರ್ಕ == ಟಿಸ್ಸಿ ಥಾಮಸ್ ಅವರ ಬಗ್ಗೆ ಇಂಡಿಯಾ ಟುಡೆಯಲ್ಲಿಯ ಲೇಖನ ಬಿಬಿಸಿ ಲೇಖನ == ಉಲ್ಲೇಖ ==